Index   ವಚನ - 117    Search  
 
ಇಂದಿಗೆಂತು ನಾಳಿಂಗೆಂತೆಂದು, ಬೆಂದ ಒಡಲಿಗೆ ಚಿಂತಿಸಿ, ಭ್ರಮೆಗೊಂಡು ಬಳಲಬೇಡ ಮರುಳೇ. ಎಂಬತ್ತುನಾಲ್ಕು ಲಕ್ಷ ಯೋನಿಯೊಳಗಾದ ಸಮಸ್ತ ಜೀವರಿಗೆ, ಭೋಗವನೂ, ಭೋಗ ವಿಷಯ ಜ್ಞಾನವನೂ, ಕೊಟ್ಟು ಸಲಹುವ ದೇವನು, ತನ್ನ ಸಲಹಲಾರನೆ? ಇದನರಿದು ಮತ್ತೇಕೆ ಚಿಂತಿಸುವೆ ಮರುಳೇ? ಹುಟ್ಟಿಸಿದ ದೇವನು ರಕ್ಷಿಸುವನಲ್ಲದೆ ಮಾಣನೆಂಬುದನರಿಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಕರುಣಿ ಕೃಪಾಳುವೆಂಬುದನರಿಯ ಮರುಳೇ.