Index   ವಚನ - 137    Search  
 
ಗುರುವ ನರಭಾವದಲ್ಲಿ ಕಂಡಡೆ, ನರಕ ತಪ್ಪದು ನೋಡಯ್ಯಾ. ಗುರುವ ಹರಭಾವದಲ್ಲಿ ಕಂಡಡೆ, ಮೋಕ್ಷ ತಪ್ಪದು ನೋಡಯ್ಯಾ. ಗುರುಪೂಜೆಯೆ ಹರಪೂಜೆಯೆಂದರಿದು, ಗುರುಪೂಜೆಯ ಮಾಡಿದಡೆ, ಹರಪೂಜೆ ತಪ್ಪದು ನೋಡಯ್ಯ. ಗುರುವಿನ ಒಲುಮೆಯೇ ಹರನ ಒಲುಮೆ. ಇದು ಸತ್ಯ. ನೀನೇ ಬಲ್ಲೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಭಕ್ತನ, ಗುರುಭಕ್ತಿಯಿದು.