Index   ವಚನ - 139    Search  
 
ತನು ಮುಂತಾದ ಕ್ರೀಯಿಂದ ಗುರುಭಕ್ತನಹುದಯ್ಯ. ಮನ ಮುಂತಾದ ಕ್ರೀಯಿಂದ ಲಿಂಗಭಕ್ತನಹುದಯ್ಯ. ಧನ ಮುಂತಾದ ಕ್ರೀಯಿಂದ ಜಂಗಮಭಕ್ತನಹುದಯ್ಯ. ಇಂತು ತನು ಮನ ಧನವ, ಗುರು ಲಿಂಗ ಜಂಗಮಕ್ಕೆ ಕೊಟ್ಟು ತಾ ನಿರ್ಲೇಪಿಯಾದನಯ್ಯ ನಿಮ್ಮ ಭಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.