Index   ವಚನ - 141    Search  
 
ಕೊಡುವಾತ ನಾನಲ್ಲ. ಕೊಡುವಾತನೂ ಕೊಂಬಾತನೂ ಶಿವನೆಂದರಿದು, ಜಂಗಮಮುಖದಲ್ಲಿ ಲಿಂಗಾರ್ಪಿತವಹುದೆಂದು, ಕೊಟ್ಟ ಭಕ್ತನೊಳಗೆ ಜಂಗಮವಡಗಿ, ಭಕ್ತಜಂಗಮ ಒಂದಾದ ಮಾಟ ಭವದೋಟ ಲಿಂಗದ ಕೂಟ. ಈ ತೆರನನರಿದು ಮಾಡುವ ಭಕ್ತನೇ ದೇವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.