Index   ವಚನ - 144    Search  
 
ಅಗ್ನಿ ರಜ್ಜುವಿನಿಂದ ಕಟ್ಟುವಡೆವುದೆ? ಸೂರ್ಯನ ಕತ್ತಲೆ, ಬಾಧಿಸಲಾಪುದೆ ಅಯ್ಯ? ಆಕಾಶವು ರಜ ಧೂಮಗಳಿಂದ, ಮಲಿನವಹುದೆ ಅಯ್ಯ? ನಿಮ್ಮನರಿದ ಶಿವಯೋಗಿಗೆ, ಸಂಸಾರ ಬಂಧಿಸಬಲ್ಲುದೆ ಹೇಳಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?