Index   ವಚನ - 159    Search  
 
ಅತ್ತಲಿತ್ತ ಹರಿವ ಮನವ ನಿಲಿಸಿ ಸ್ವಸ್ಥಾನಂಗೊಳಿಸಿ, ತತ್ವಾನುಭಾವ ರಹಸ್ಯದ ಕೀಲನರಿದು, ತತ್ವಮಸಿ ವಾಕ್ಯದ ಮೇಲಣ ಷಡುಸ್ಥಲ ಲಿಂಗವ ತಿಳಿದು, ಆ ಲಿಂಗಕ್ಕೆ ಷಡುಸ್ಥಲಾಂಗವನಾದಿ ಮಾಡಿ, ಆ ಲಿಂಗವನು ಲಿಂಗಮುಖವ ಮಾಡಿದುದೇ, ಸರ್ವಾಂಗಲಿಂಗಿಯ ಮತವು. ಈ ಗುಣವುಳ್ಳ ಷಡುಸ್ಥಲ ಲಿಂಗಾಂಗಿಯೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ ಬೇರಿಲ್ಲ.