Index   ವಚನ - 168    Search  
 
ಬ್ರಹ್ಮಾದಿ ದೇವತೆಗಳೇನು ಮುಕ್ತಿ ದಾನಶೀಲರೇ? ಅಲ್ಲ. ಮಾಯಾಪಾಶದಲ್ಲಿ ಬದ್ಧರಾದವರೆಲ್ಲ ಮುಕ್ತಿ ದಾನಶೀಲರಹರೆ? ಮುಕ್ತಿ ದಾನಶೀಲ ಶಿವನೊಬ್ಬನಲ್ಲದಿಲ್ಲವೆಂದು ನಂಬಿ ದೃಢವಿಡಿವುದು ಹಲವ ಹಂಬಲಿಸಿ ಬಳಲಲೇಕೆ?. ಶ್ರೀಗುರುವಚನವ ತಿಳಿದು ನೋಡಿ ನೆನೆದು ಸುಖಿಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಮುಕ್ತಿ ದಾನಶೀಲನ.