Index   ವಚನ - 173    Search  
 
ಹುರಿದ ಬೀಜದಂತೆ, ಬೆಂದ ನುಲಿಯಂತೆ, ಹಿಂದಣಂಗ ಉಂಟೆ ಹೇಳ? ಸಮ್ಯಗ್ ಜ್ಞಾನಾಗ್ನಿಯಲ್ಲಿ ದಗ್ಧವಾದ ಜನ್ಮ ಬೀಜವನುಳ್ಳ ಶರಣನು, ಶಿವಕಾಯವನಾಶ್ರಯಿಸಿ ಶಿವ ತಾನಾಗಿಹನಲ್ಲದೆ, ತನಗೆ ಬೇರೆ ಕಾಯವಿಲ್ಲ. ತಾನೆಂಬುದು ಮುನ್ನವೇ ಇಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೇ ಅಂಗವಾದಂಗೆ.