Index   ವಚನ - 186    Search  
 
ಅದ್ವೈತವ ಸಾಧಿಸಿ ಸರ್ವವೂ ಶಿವನೆಂಬರು ಎನಲಾಗದು. ಸರ್ವಕ್ಕೂ ಲಯ ಗಮನವುಂಟು ಶಿವಂಗಿಲ್ಲವಾಗಿ. ಯಂತ್ರವಾಹಕನೆಲ್ಲಿಯೂ ಪರಿಪೂರ್ಣವಾಗಿಹನೆಂದಡೆ ಎಲ್ಲವೂ ಶಿವನಾಗಬಲ್ಲವೆ? ಆಗಲರಿಯವು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಪದ್ಮಪತ್ರಜಲದಂತೆ ಹೊದ್ದಿಯು ಹೊದ್ದದಂತಿಹನು.