Index   ವಚನ - 188    Search  
 
ಶ್ರೀಗುರುಸದ್ಭಾವಜಾತಲಿಂಗವು ಶಿವಕಲೆ ಸಂಪೂರ್ಣವಾಗಿ ಕರಸ್ಥಲದಲ್ಲಿ ಮೂರ್ತಿಗೊಂಡಿರಲು, ಕಂಗಳಲ್ಲಿ ನೋಡಿ, ಮನದಲ್ಲಿ ನೆನೆದು, ಸುಖಿಯಹುದಲ್ಲದೆ ಬೇರೆ ಆಹ್ವಾನಿಸಲುಂಟೇ ಬರುಕಾಯನಂತೆ? ಹಾಲಹಳ್ಳ ಹರಿವುತ್ತಿರಲು ಅದ ಬಿಟ್ಟು, ಓರೆಯಾವಿನ ಬೆನ್ನ ಬಳಿಯಲಿ ಹರಿಯಲುಂಟೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತನ್ನಲ್ಲಿದ್ದುದನರಿಯದೆ ಬೇರರಸಿ ಬಳಲುವರೆಲ್ಲರು ಭ್ರಮಿತರು.