ಅರಳಿದ ಪುಷ್ಪ ಪರಿಮಳಿಸಿದಲ್ಲದೆ ಮಾಣದು.
ಗುರುವಿನಿಂದ ಪಡೆದ ಶಿವಲಿಂಗವ ಹರುಷದಿಂದ
ನೋಡಿ ನೆನೆದಡೆ,
ಆ ಲಿಂಗ, ಕಣ್ಮನವ ವೇಧಿಸಿದಲ್ಲದೆ ಮಾಣದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವಡೆ,
ನೋಟ ಬೇಟವೆರಡು ಅಳಿದಲ್ಲದಾಗದು.
Art
Manuscript
Music
Courtesy:
Transliteration
Araḷida puṣpa parimaḷisidallade māṇadu.
Guruvininda paḍeda śivaliṅgava haruṣadinda
nōḍi nenedaḍe,
ā liṅga, kaṇmanava vēdhisidallade māṇadu,
nijaguru svatantrasid'dhaliṅgēśvarana kūḍuvaḍe,
nōṭa bēṭaveraḍu aḷidalladāgadu.