ಕಾಲೋಚಿತವಾಗಿ ಅರ್ಪಿತಕ್ಕೆ ಬಂದ
ಭೂತಜಾತಪದಾರ್ಥಂಗಳನು,
ಕಾಯದ ಕರದಲ್ಲಿ ಮುಟ್ಟಿ, ಅರ್ಪಿಸುವ ಅರ್ಪಣವನರಿದು,
ಇಂದ್ರಿಯಂಗಳ ಮುಖದಲ್ಲಿ ಮುಟ್ಟದೆ,
ಅರ್ಪಿಸುವ ಅರ್ಪಣವರಿದು,
ಇಷ್ಟಲಿಂಗಕ್ಕೆ ರೂಪು, ಪ್ರಾಣಲಿಂಗಕ್ಕೆ ರುಚಿಯನಿತ್ತು ಕೊಂಬ,
ಅನುಪಮ ಪ್ರಸಾದಿಯನುಪಮಿಸಬಹುದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
Art
Manuscript
Music
Courtesy:
Transliteration
Kālōcitavāgi arpitakke banda
bhūtajātapadārthaṅgaḷanu,
kāyada karadalli muṭṭi, arpisuva arpaṇavanaridu,
indriyaṅgaḷa mukhadalli muṭṭade,
arpisuva arpaṇavaridu,
iṣṭaliṅgakke rūpu, prāṇaliṅgakke ruciyanittu komba,
anupama prasādiyanupamisabahude,
nijaguru svatantrasid'dhaliṅgēśvara?