Index   ವಚನ - 236    Search  
 
ತಾನು ಲಿಂಗಾವಧಾನಿಯಾಗಿ, ಪದಾರ್ಥ ತನ್ನಂಗವ ಸೋಂಕದ ಮುನ್ನ, ಪದಾರ್ಥದ ಪೂರ್ವಾಶ್ರಯವ ಕಳೆದು, ಲಿಂಗಮುಖವ ಮಾಡಿ, ತನು ಮನ ಪ್ರಾಣ ಪ್ರಸಾದ ಸಂತೃಪ್ತಿಯನೆಯ್ದಿ, ಪ್ರಸಾದ ಸುಖಾಬ್ಧಿಯೊಳೋಲಾಡುತ್ತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದ ಸಂಪತ್ತಿನಲ್ಲಿಹನು.