Index   ವಚನ - 238    Search  
 
ಶ್ರೀ ಗುರುವಿನ ಮಂತ್ರೋಪದೇಶವು ಶಬ್ದ ಪ್ರಸಾದಕ್ಕಾಶ್ರಯವಾಯಿತ್ತು. ಶ್ರೀ ಗುರುವಿನ ಹಸ್ತ ಮಸ್ತಕ ಸಂಯೋಗವು ಸ್ಪರ್ಶನಪ್ರಸಾದಕ್ಕಾಶ್ರಯವಾಯಿತ್ತು. ಶ್ರೀ ಗುರುವಿನ ಕೃಪಾವಲೋಕನವು ಅವಲೋಕನಪ್ರಸಾದಕ್ಕಾಶ್ರಯವಾಯಿತ್ತು. ಶ್ರೀಗುರುವಿನ ನಿರ್ಮಾಲ್ಯ ಗಂಧವು ಸದ್ಗುಣಗಂಧಪ್ರಸಾದಕ್ಕಾಶ್ರಯವಾಯಿತ್ತು. ಇಂತಪ್ಪ ಶ್ರೀಗುರುವಿನ ಪ್ರಸಾದವ ಪಡೆದಾತಂಗೆ ಭವಮಾಲೆಯುಂಟೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?.