ಪ್ರಸಾದವನು ಪ್ರಸಾದಿಯನು ಪದಾರ್ಥದ ಭೇದವನು
ಅರಿವುದರಿದು ನೋಡಾ.
ಮುನ್ನಾದಿಯ ಪ್ರಸಾದವು ಅರ್ಪಣಕ್ಕೆ ಬಂದಲ್ಲಿ
ಉಪಚಾರದಿಂದ ಪದಾರ್ಥವೆನಿಸಿತ್ತು.
ಅರ್ಪಣದ ಮೇಲೆ ಪ್ರಸಾದವೆನಿಸಿತ್ತು.
ಈ ಪ್ರಸಾದದಾದಿ ಕುಳವ ಬಲ್ಲಡೆ, ಆತ ಪ್ರಸಾದಿ.
ಪ್ರಸಾದಿಯ ಬಿಟ್ಟು ಪ್ರಸಾದವಿಲ್ಲ,
ಪ್ರಸಾದ ಬಿಟ್ಟು ಪ್ರಸಾದಿಯಿಲ್ಲ.
ಪ್ರಸಾದವೂ ಪ್ರಸಾದಿಯೂ ಕೂಡಿ ಸೋಂಕದ ಪದಾರ್ಥವಿಲ್ಲ.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಪ್ರಸಾದಿಯ ಪ್ರಸಾದದಿಂದ,
ಮೂರು ಲೋಕವೆಲ್ಲಾ ಜೀವಿಸಿತ್ತಾಗಿ,
ಅಂತಪ್ಪ ಪ್ರಸಾದಿಗೆ ನಮೋ ನಮೋ ಎನುತ್ತಿರ್ದೆನು.
Art
Manuscript
Music
Courtesy:
Transliteration
Prasādavanu prasādiyanu padārthada bhēdavanu
arivudaridu nōḍā.
Munnādiya prasādavu arpaṇakke bandalli
upacāradinda padārthavenisittu.
Arpaṇada mēle prasādavenisittu.
Ī prasādadādi kuḷava ballaḍe, āta prasādi.
Prasādiya biṭṭu prasādavilla,
prasāda biṭṭu prasādiyilla.
Prasādavū prasādiyū kūḍi sōṅkada padārthavilla.
Idu kāraṇa,
nijaguru svatantrasid'dhaliṅgēśvarana
prasādiya prasādadinda,
mūru lōkavellā jīvisittāgi,
antappa prasādige namō namō enuttirdenu.