ಆಸನ ಬಂಧವ ಮಾಡಿ,
ನಾಸಿಕಾಗ್ರದಲ್ಲಿ ದೃಷ್ಟಿಯನಿರಿಸಿ
ಸೂಸಲೀಯದೆ ಮನವ, ಬೀಸರ ಹೋಗದೆ ಪವನ[ನ]
ಓಸರಿಸಲೀಯದೆ ಬಿಂದುವ, ಊರ್ಧ್ವಕ್ಕೆತ್ತಿ
ಇಂತೀ ತ್ರಿವಿಧವನೊಂದೇ ಠಾವಿನಲ್ಲಿ ಬಲಿದು ನಿಲಿಸಿ
ಸಾಸಿರದಳಕಮಲದ ನಾದಾತ್ಮಲಿಂಗದಲ್ಲಿ ಮನ ಲೀಯವಾದಡೆ
ಅದೇ ಪರಮ ರಾಜಯೋಗವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೈದುವಡೆ.
Art
Manuscript
Music
Courtesy:
Transliteration
Āsana bandhava māḍi,
nāsikāgradalli dr̥ṣṭiyanirisi
sūsalīyade manava, bīsara hōgade pavana[na]
ōsarisalīyade binduva, ūrdhvakketti
intī trividhavanondē ṭhāvinalli balidu nilisi
sāsiradaḷakamalada nādātmaliṅgadalli mana līyavādaḍe
adē parama rājayōgavayyā,
nijaguru svatantrasid'dhaliṅgēśvarana nijavanaiduvaḍe.