Index   ವಚನ - 274    Search  
 
ಮಿಂಚಿನ ರವೆಯಂತೆ ಎನ್ನಂತರಂಗದಲ್ಲಿ ತೋರುವೆ, ಅಡಗುವೆ, ಇದೇನು ವಿಗಡ ಚರಿತ್ರೆ? ಒಳಗೆ ತೊಳಗಿ, ಬೆಳಗಿ ಬೆಳಗದಂತಿಹೆ. ಸದೋದಿತನೆಂದು ಶ್ರುತಿ ಸಾರುತ್ತಿರಲು, ತೋರಿಯಡಗುವುದು ನಿನಗೆ ಸಹಜವಲ್ಲಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.