ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ
ಯೋಗದ ಕ್ರಮವ ಹೇಳಿಹೆವು ಕೇಳಿರಯ್ಯ.
ಸುಷುಮ್ನೆಯ ನಾಲ್ದೆಸೆಯಲ್ಲಿ, ಆತ್ಮಕಲೆ ವಿದ್ಯಾಕಲೆ ನಾದಕಲೆ
ಬಿಂದುಕಲೆಗಳನರಿಯಬೇಕು.
ಆ ಕಲೆ ನಾಲ್ಕು ಸುತ್ತಿ, ಅಗ್ನಿಕಲೆಗಳ ಹತ್ತನರಿವುದು.
ಪಿಂಗಳೆಯಲ್ಲಿ ಭಾನುಕಲೆಗಳ ಹನ್ನೆರಡನರಿವುದು.
ಇಡೆಯಲ್ಲಿ ಚಂದ್ರಕಲೆಗಳು ಹದಿನಾರು
ಕ್ಷಯ ವೃದ್ಧಿಯಾಗಿ ನಡೆವುದನರಿವುದು.
ಈ ಮೂವತ್ತೆಂಟು ಕಲೆಗಳ ಕೂಡಿಹ ಚಂದ್ರಸೂರ್ಯಾಗ್ನಿಗಳ
ಮಧ್ಯದಲ್ಲಿ ತತ್ವಮೂರು ಕೂಡೆ ಬೆಳಗುವ
ಪರಜ್ಯೋತಿರ್ಲಿಂಗವನರಿದು ಯೋಗಿಸಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಳಿಕ
ಕೂಡುವುದು ಕಾಣಿರಣ್ಣಾ.
Art
Manuscript
Music
Courtesy:
Transliteration
Yōgatāṇavanaridu yōgisihenemba yōgigaḷige
yōgada kramava hēḷihevu kēḷirayya.
Suṣumneya nāldeseyalli, ātmakale vidyākale nādakale
bindukalegaḷanariyabēku.
Ā kale nālku sutti, agnikalegaḷa hattanarivudu.
Piṅgaḷeyalli bhānukalegaḷa hanneraḍanarivudu.
Iḍeyalli candrakalegaḷu hadināru
kṣaya vr̥d'dhiyāgi naḍevudanarivudu.
Ī mūvatteṇṭu kalegaḷa kūḍ'̔iha candrasūryāgnigaḷa
madhyadalli tatvamūru kūḍe beḷaguva
parajyōtirliṅgavanaridu yōgisi
nijaguru svatantrasid'dhaliṅgēśvarana baḷika
kūḍuvudu kāṇiraṇṇā.