Index   ವಚನ - 289    Search  
 
ನುಡಿಯೊಳಗೆ ಸತ್ಯ, ಹೃದಯದಲ್ಲಿ ಯುಕ್ತಿ, ಅರುವಿನಲ್ಲಿ ವಿರಕ್ತಿ ದೊರಕೊಂಡರೆ, ಅಂತವರಲ್ಲಿಯೇ ಭಕ್ತಿ ದೊರಕೊಂಬುದು. ಆ ಭಕ್ತಿ, ತಾನೆ ಮುಕ್ತಿ ಮಾತೆಯಾದ ಕಾರಣ ಭಕ್ತಿಯಿಂದ ಶಿವನಲ್ಲಿ ನಿರ್ಮಲ ಚಿತ್ತವನಿರಿಸಿ ನೆನೆವುದು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.