ಆಚಾರದನುಭಾವವಿಡಿದು, ವಿಚಾರವಂತರಾಗಿ,
ಸುಜ್ಞಾನಾಚಾರದಿಂದ ಹೃದಯದ ಕಲ್ಮಷವ ಕಳೆದು,
ನಿರ್ಮಲ ಹೃದಯರಾದ ನಿತ್ಯಾನಂದಿಗಳು
ತಾವೆ ಶಿವರಹುದರಿಂದ
ಜ್ಞಾನಶೂನ್ಯವ ಭಜಿಸಿ ನಿಜಲಿಂಗೈಕ್ಯರಾಗಿಹರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
Art
Manuscript
Music
Courtesy:
Transliteration
Ācāradanubhāvaviḍidu, vicāravantarāgi,
sujñānācāradinda hr̥dayada kalmaṣava kaḷedu,
nirmala hr̥dayarāda nityānandigaḷu
tāve śivarahudarinda
jñānaśūn'yava bhajisi nijaliṅgaikyarāgiharu,
nijaguru svatantrasid'dhaliṅgēśvarana śaraṇaru.