Index   ವಚನ - 301    Search  
 
ಕಾಷ್ಠದ ಮೇಲೊಂದು ಕಾಷ್ಠವನಿರಿಸಿ ಹಿಡಿದು ಮಥನವ ಮಾಡಲು ಆ ಮಥನದಿಂದುದ್ಭವಿಸಿದಗ್ನಿ ಆ ಕಾಷ್ಠವ ವೇಷ್ಠಿಸಿ, ತನ್ನ ಸ್ಫುರಣೆಯಿಂದ ಉಷ್ಣಿಸುವಂತೆ ಶಿವಶರಣರ ಅನುಭಾವಮಥನದಿಂದ ಮಹಾಜ್ಞಾನೋದಯವಾಗಿ ಕರ್ಪುರದ ಗಿರಿಯನುರಿಕೊಂಡು ನಿರಂಶಕವಾಗಿ ಉಭಯ ನಿರ್ವಯಲಾದಂತೆ ಲಿಂಗಾಂಗದೈಕ್ಯವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.