Index   ವಚನ - 304    Search  
 
ಕಾಲ ಕೈಯೊಳಗಿರಿಸಿ ನಡೆವಾತನ ನಡೆ ಶುದ್ಧ. ಕೈಯ ಕಣ್ಣೊಳಗಿರಿಸಿ ನೋಡುತ್ತಿಪ್ಪಾತನ ನೋಟ ಶುದ್ಧ. ಆ ಕಣ್ಣ ಮನದೊಳಗಿರಿಸಿ ನೆನೆವುತ್ತಿಪ್ಪಾತನ ಮನ ಶುದ್ಧ, ಆ ಮನವ ಭಾವದೊಳಗಿರಿಸಿ ಭಾವಿಸುತ್ತಿಪ್ಪಾತನ ಭಾವ ಶುದ್ಧ. ಆ ಭಾವವು ನಿರ್ಭಾವವನೆಯ್ದಿ ನಿರವಯಲಾದರೆ, ಆತ ಸ್ವತಂತ್ರ ಶರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯನು.