Index   ವಚನ - 315    Search  
 
ಜ್ಞಾನಿಯ ನಡೆ ನುಡಿ ಅಜ್ಞಾನಿಗೆ ಸೊಗಸದು. ಅಜ್ಞಾನಿಯ ನಡೆ ನುಡಿ ಜ್ಞಾನಿಗೆ ಸೊಗಸದು. ದಿವಾ ರಾತ್ರಿಗಳಂತೆ ಒಂದಕ್ಕೊಂದಾಗದು. ಅರಿವಿನಿಂದ ಉದಯಿಸಿದ ಶರಣನು ಮೆರೆಯಬೇಕೆಂದು ಮರಹಿಂದ ಹುಟ್ಟಿದ ಮಾನವರ ಇದಿರ ಮಾಡಿದೆಯಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.