Index   ವಚನ - 318    Search  
 
ಕೆಲರೊಳ್ಳಿದನೆಂಬರು, ಕೆಲರು ಹೊಲ್ಲನೆಂಬರು ಆರಾರು ತಿಳಿವ ಭ್ರಾಂತಿಯನಾರು ತಿಳಿಯಬಹುದಯ್ಯ? ಇದು ಕಾರಣ, ಹಲವು ಸುಕರ್ಮ ದುಃಕರ್ಮಂಗಳ ಬುದ್ಧಿಭೇದದಿಂದ ನುಡಿದರೆಂದರೆ, ತಾನವರಂತಹನೆ ಜ್ಞಾನಿಯಾದ ಶರಣನು? ತನ್ನ ಪರಿಯನಾರಿಗೂ ತೋರದೆ ಜಗದ ಕಣ್ಣಿಂಗೆ ಮರೆಯಾಗಿ ಸುಳಿವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.