Index   ವಚನ - 343    Search  
 
ಸಮತೆಯೆಂಬ ಕಂಥೆಯ ಧರಿಸಿ ಕ್ಷಮೆಯೆಂಬ ಭಸ್ಮಧಾರಣವನಳವಡಿಸಿ ಸರ್ವಜೀವದಯಾಪರವೆಂಬ ಕಮಂಡಲವ ತಳೆದುಕೊಂಡು ಸುಜ್ಞಾನವೆಂಬ ದಂಡವ ಹಿಡಿದು ವೈರಾಗ್ಯವೆಂಬ ಭಿಕ್ಷಾಪಾತ್ರೆ ಸಹಿತ, ಭಕ್ತಿ ಭಿಕ್ಷವ ಬೇಡ ಬಂದನಯ್ಯ. ಸತ್ಯ ಶರಣರಾದ ಭಕ್ತರನರಸುತ್ತ, ಭಕ್ತಿ ಭಿಕ್ಷವ ಬೇಡ ಬಂದನಯ್ಯ. ಕಾಯದ ಕಳವಳವ ಕಳೆದು, ಜೀವನೋಪಾಯವಿಲ್ಲದೆ, ಸುಳಿವನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಭಕ್ತಿ ಕಾರಣವಾಗಿ.