Index   ವಚನ - 369    Search  
 
ಕಾಬುದೊಂದು ಜ್ಞಾನ, ಕಾಣಿಸಿಕೊಂಬುದೊಂದು ಜ್ಞೇಯವೆಂದು ವಿವರಿಸಿ ನುಡಿಯಬಹುದೆ? ಇಂದು ಭಾನು ದೀಪಂಗಳು ತಮ್ಮ ಬೆಳಗಿನಿಂದ ತಮ್ಮನರುಹಿಸಿಕೊಂಬಂತೆ ಜ್ಞಾನ ಜ್ಞೇಯಂಗಳ ಪರಿಯೆಂದರಿದಾತನರಿವು. "ನಿಜ ಅಖಂಡಾನಂದ ಸಂವಿತ್ ಸ್ವರೂಪಂ ಬ್ರಹ್ಮ ಕೇವಲಂ" ಎಂದುದಾಗಿ, ಲಿಂಗಾಂಗ ಸಂಬಂಧ ಸಕೀಲವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಬಲ್ಲ.