Index   ವಚನ - 372    Search  
 
ಎಲೆಯುದುರಿದ ವೃಕ್ಷ ಉಲಿಯಬಲ್ಲುದೆ? ಜಲವರತ ತಟಾಕ ಗೊರೆಗೊಳಬಲ್ಲುದೆ? ಸಲೆ ಶಿವನನರಿದು ತಾ ಶಿವನೊಳು ಕೂಡಿ ಮಾಡುವ ಕ್ರೀ ಫಲವ ಕೊಡಬಲ್ಲುದೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾಡುವ ಕ್ರೀ, ಹುರಿದ ಬೀಜದಂತೆ.