Index   ವಚನ - 374    Search  
 
ಖೇಚರದ ಗಮನವ ಖೇಚರರಲ್ಲದೆ ಭೂಚರರು ಬಲ್ಲರೆ ಅಯ್ಯ? ಸವಿವಾಲು ಸಕ್ಕರೆಯ ಸವಿಯ ಸವಿದ ಭೋಗಿಯಲ್ಲದೆ ರೋಗಿ ಬಲ್ಲನೆ ಅಯ್ಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಲಿಂಗಾಂಗದ ಲಿಂಗ ಸಹಗಮನಿಯ ಹೃದಯವ ಲಿಂಗಾಂಗಿಯಲ್ಲದೆ ಅಂಗಜೀವಿಗಳು ಬಲ್ಲರೆ ಅಯ್ಯಾ?