ಸರ್ವಾಂಗವು ಲಿಂಗಸಂಗವಾಗಿ,
ಲಿಂಗ ಸರ್ವಾಂಗಸಂಗವಾಗಿ,
ಪ್ರಾಣ ಲಿಂಗದಲ್ಲಿ ಸಂಗವಾಗಿ,
ಲಿಂಗ ಪ್ರಾಣದಲ್ಲಿ ಸಂಗವಾಗಿ,
ಸಕಲೇಂದ್ರಿಯಂಗಳು ಲಿಂಗಸಂಗವಾಗಿ,
ಲಿಂಗ ಸಕಲೇಂದ್ರಿಯಂಗಳಲ್ಲಿ ಸಂಗವಾಗಿ,
ಮನ ಲಿಂಗಸನ್ನಿಹಿತವಾಗಿ, ಲಿಂಗ ಮನಸನ್ನಿಹಿತವಾಗಿ,
ಸಮರಸ ಸದ್ಭಾವಿಯಾದ ಶರಣನೆ ಲಿಂಗವು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
Art
Manuscript
Music
Courtesy:
Transliteration
Sarvāṅgavu liṅgasaṅgavāgi,
liṅga sarvāṅgasaṅgavāgi,
prāṇa liṅgadalli saṅgavāgi,
liṅga prāṇadalli saṅgavāgi,
sakalēndriyaṅgaḷu liṅgasaṅgavāgi,
liṅga sakalēndriyaṅgaḷalli saṅgavāgi,
mana liṅgasannihitavāgi, liṅga manasannihitavāgi,
samarasa sadbhāviyāda śaraṇane liṅgavu
nijaguru svatantrasid'dhaliṅgēśvarā.