Index   ವಚನ - 382    Search  
 
ಶಿವಶರಣನ ಶಿರ ಮೊದಲು ಪಾದ ಕಡೆಯಾದವೆಲ್ಲವು ಅಮೃತಮಯವಾಗಿಹವು ನೋಡಾ. ನರಚರ್ಮಾಂಬರವ ಹೊದ್ದಿಹ ಶರಣನ ಒಳಗು ಹೊರಗೆಂಬವೆಲ್ಲ ಮೋಕ್ಷರೂಪವಾಗಿಹವು ನೋಡಾ. ಆ ಶರಣನ ಮರ್ತ್ಯರೂಪನೆಂದು ತಿಳಿಯಬಾರದು. ಆತ ಚಿದ್ರೂಪಾಕಾರ ಪರಮಾತ್ಮನು ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂದೇ ತಿಳಿವುದು.