Index   ವಚನ - 394    Search  
 
ಶಿವಧ್ಯಾನದ ಕಡೆಯಲ್ಲಿ ಒಪ್ಪಿ ತೋರುವ ಸಂವಿತ್ತಿನ ತೃಪ್ತಿಯಂದ ತನ್ನ ಮರೆದ ಶರಣನು ಪರಮ ಪ್ರಕಾಶರೂಪನಾದ ಶಿವನ ಕೂಡಿ ಸರ್ವಜೀವರ ಹೃದಯದಲ್ಲಿದ್ದು, ಅವಕ್ಕೆ ಅರಿವ ಅರುಹಿಸಿ ಕೊಡುತ್ತ ಎಲ್ಲ ಕಡೆಯಲ್ಲಿ ಸುಖರಾಶಿಯಾದ ಚೈತನ್ಯ ಸ್ವರೂಪ ಪರಬ್ರಹ್ಮವೇ ತಾನಾಗಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.