Index   ವಚನ - 399    Search  
 
ಆರನರಿದು, ಮೂರತಿಳಿದು, ಎರಡರೊಳು ನಿಲಿಸಿ ಎರಡನೊಂದುಮಾಡಿ ಕೂಡಿಹೆನೆಂಬುಪಮೆಯುಳ್ಳನ್ನಕ್ಕ ಕಾಡುವುದು ಲಿಂಗೈಕ್ಯವು. ಈ ಉಪಮೆಯಳಿದು ಅನುಪಮೆಯಾದರೆ ಅದೇ ಮಹಾಲಿಂಗೈಕ್ಯವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನಾದ ನಿಲವು.