Index   ವಚನ - 406    Search  
 
ಮನದಲ್ಲಿ ತೋರುವ ನಾನಾ ತೋರಿಕೆಯ ಚಿಂತೆಯಳಿದು ನಿಶ್ಚಿಂತನಾದ ಶಿವಯೋಗಿ, ಏನೊಂದನೂ ಮನದಲ್ಲಿ ಚಿಂತಿಸದೆ ಉದಾಸೀನಪರವಾಗಿ ಶಿವಶಕ್ತ್ಯಾತ್ಮಕವಾದ ಈ ವಿಶ್ವವನು ಜ್ಞಾನಸ್ಥಾನದಲ್ಲಿ ಲಯವನೈದಿಸಿ ಆ ನಿರಾಲಂಬಜ್ಞಾನದಲ್ಲಿ ಮನೋಲಯವಾದ ಶರಣಂಗೆ ಹೊರಗೊಳಗು ಊರ್ಧ್ವಾಧೋಮಧ್ಯವೆಂಬವೇನೂ ತೋರದೆ ಎಲ್ಲವೂ ತನ್ನಾಕಾರವಾಗಿ ನಿರಾಕಾರ ಸ್ವಸಂವೇದ್ಯ ಪರತತ್ವ ತಾನೆಯಾಗಿಹನು' ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.