Index   ವಚನ - 410    Search  
 
ಅವನಿಯ ಪಿಂಡವ ನುಂಗಿ, ಉದಕವ ಪಾನವ ಮಾಡಿ, ಅಗ್ನಿಯ ಮೆಟ್ಟಿ, ವಾಯುವ ಹಿಡಿದು, ಆಕಾಶವನಡರಿ, ಮಹಾದಾಕಾಶದ ಬಯಲೊಳಗೆ ನಿಂದು ನೋಡಲು, ಸರ್ವಶೂನ್ಯನಿರಾಕಾರವೆಂಬ ಬಯಲು ಕಾಣಬಂದಿತ್ತು. ಆ ಬಯಲ ಬೆರಸಿಹೆನೆಂದು ಬಸವ, ಪ್ರಭು ಮೊದಲಾದ ಗಣಂಗಳ ಮಹಾನುಭಾವ ಸಂಪಾದನೆಯನರಿದು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಬಯಲ ಬೆರಸಿದೆನು.