Index   ವಚನ - 412    Search  
 
ಹಿಂದು ಮುಂದಣ ಮನದ ಸಂಕಲ್ಪ ವಿಕಲ್ಪವಳಿದು, ರೂಪಜ್ಞಾನ ನಿರೂಪಜ್ಞಾನವೆಂಬುವೇನೂ ತೋರದೆ, ಜ್ಞಾನ ಜ್ಞೇಯ ಧ್ಯಾನ ಧ್ಯೇಯ ಲಕ್ಷ್ಯಾಲಕ್ಷ್ಯ ದೃಗ್ ದೃಶ್ಯಗಳೆಂಬ ವಿಚಾರವಳಿದ ಜೀವನ್ಮುಕ್ತಂಗೆ ಅರಿಯಲೊಂದಿಲ್ಲ, ಮರೆಯಲೊಂದಿಲ್ಲ, ತೆರೆಯಡಗಿದ ಅಂಬುನಿಧಿಯಂತೆ ನಿಶ್ಚಿಂತನಾಗಿದ್ದನು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ.