Index   ವಚನ - 418    Search  
 
ಪೃಥ್ವಿಯ ಬೀಜ ಅಪ್ಪುವ ಕೂಡಿ, ಅಗ್ನಿಯಲ್ಲಿ ಮೊಳೆದೋರಿತ್ತು. ವಾಯುವಿನಲ್ಲಿ ಶಾಖೆದೋರಿ, ಆಕಾಶದಲ್ಲಿ ಪಲ್ಲವಿಸಿತ್ತು. ಮಹದಾಕಾಶದಲ್ಲಿ ಫಲದೋರಿ, ಶೂನ್ಯದಲ್ಲಿ ಹಣ್ಣಾಯಿತ್ತು. ಅದು ನಿರಾಳದಲ್ಲಿ ರಸತುಂಬಿ, ನಿರ್ವಯಲಲ್ಲಿ ತೊಟ್ಟು ಬಿಟ್ಟಿತ್ತು. ಆ ಹಣ್ಣ ಪ್ರಭುದೇವರಾರೋಗಿಸಿದರಾಗಿ ನಿರ್ವಯಲಾದರು. ಆ ಪ್ರಭುದೇವರಾರೋಗಿಸಿ ಮಿಕ್ಕ ಪ್ರಸಾದವ ಬಸವಣ್ಣ ಮೊದಲಾದ ಅಸಂಖ್ಯಾತ ಮಹಾಗಣಂಗಳು ಸ್ವೀಕರಿಸಿದರಾಗಿ ಶಿವನೊಳಗಾದರು. ನಾನು ಮಹಾಗಣಂಗಳ ಪ್ರಸಾದವನಾರೋಗಿಸಿದೆನಾಗಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನೊಳಗೆನ್ನನಿಂಬಿಟ್ಟುಕೊಂಡನು.