Index   ವಚನ - 434    Search  
 
ನೀರು ನೇಣಾದಿ ದುರ್ಮರಣದಲ್ಲಿ ಹೋದರುಯೆಂಬ, ನುಡಿಗಳನು ಮಾನವರುಯೆಂದರೆ, ಅವರ ಸೊಲ್ಲ ಕೇಳಲಾಗದು. ಶಿವ ಕಳುಹಿಸಿದೊಡೆ ಬಹುದಲ್ಲದೆ ತನ್ನಿಚ್ಛೆಯಲ್ಲಿ ಬರುವದುಂಟೆ? ಇದ ಕಿವಿಗೊಟ್ಟು ಕೇಳುವ ಪಾತಕರ ನುಡಿಯ ಕೇಳಲಾಗದು. ಆ ಶಿವನು ಕಳುಹಿಸಿದರೆ ಬಹುದಲ್ಲದೆ, ತನ್ನಿಚ್ಛೆಯಲ್ಲಿವೊಂ[ದಿ] ಬರುವುದುಂಟೆ?, ಇದ ಕೇಳಲಾಗದು ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.