Index   ವಚನ - 9    Search  
 
ಮತ್ತಂ, ಸ್ಥಲವೊಂದೆ ತನ್ನ ಶಕ್ತಿಯ ಮಿಸುಕಿನಂಗಸ್ಥಲ ಲಿಂಗಸ್ಥಲಂಗಳೆಂದೆರಡಾಯ್ತಾ ಯಂಗಸ್ಥಲಮೆ ತ್ಯಾಗಾಂಗ ಭೋಗಾಂಗ ಯೋಗಾಂಗಮೆಂದು ಮೂದೆರನಾಗಲೊಡನಾ ಲಿಂಗಸ್ಥಲಮೆ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಮೆಂದು ಮೂದೆರನಾಗಲೊಡನಾ ಅಂಗ ಲಿಂಗೈಕಮಯಂ ನೀನೆಯಲಾ ಪರಮ ಶಿವಲಿಂಗ ಪರಂಜ್ಯೋತಿರಂಗ ಪಾವನ ಕೃಪಾರಸತರಂಗ ಚಿದಂಗಸಂಗ.