ಲಿಂಗ ಜಂಗಮವೆಂಬ ಸಕೀಲವ ಅರಿದು,
ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು
ಆ ಲಿಂಗ ಜಂಗಮದೊಳಡಗಿ,
ಆ ಜಂಗಮ ಪರಾಪರವೆಂದರಿದು ತೋರಿದ ಬಸವಣ್ಣನು.
ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ,
ಗುಹೇಶ್ವರಾ, ನಿಮ್ಮ ಅನುವನರಿದು
ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ
ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ,
ನಾನು ಸಂಗನ ಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
Transliteration Liṅga jaṅgamavemba sakīlava aridu,
liṅgārcane jaṅgamārcaneya māḍalu
ā liṅga jaṅgamadoḷaḍagi,
ā jaṅgama parāparavendaridu tōrida basavaṇṇanu.
Ā jaṅgamavemba ghanavu nim'moḷaḍagida kāraṇa,
guhēśvarā, nim'ma anuvanaridu
saṅganabasavaṇṇanu tanna prasādavanikkidaḍe
nim'ma pramatharellaru jaya jaya enutirdarāgi,
nānu saṅgana basavaṇṇana śrīpādakke
namō namō enutirdenu.
Hindi Translation लिंग जंगम जैसा रहस्य जानकर,
लिंगार्चन जंगमार्चन करे तो
वह लिंग जंगम में छिपे,
वह जंगम परापर जान दिखाया था।
वह जंगम जैसे घन तुम में छिपे कारण,
गुहेश्वरा, तुम्हारी रीति जानकर
संगनबसवण्णा अपना प्रसाद रखे तो
तुम्हारे सब प्रमथ जय जय कह रहने से
मैं बसवण्णा को नमो नमो कह रहा हूँ।
Translated by: Eswara Sharma M and Govindarao B N