Index   ವಚನ - 34    Search  
 
ಶಕ್ತಿ ಎನಲಾ ಮಹಾಲಿಂಗದೊಳಗ್ನ್ಯುಷ್ಣದಂತವಿರಳಮಾದ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿಚ್ಛಕ್ತಿಗಳೆಂಬಿವು ಮುಖಮೆನೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯಮೆಂಬೀ ಮುಖಂಗಳಲ್ಲಿ ಪೂರ್ವೋಕ್ತ ಷಡ್ಲಿಂಗಾಕಾರದಿಂದಿರ್ಪೆಯಯ್ಯಾ, ಪರಮಶಿವಲಿಂಗ ಷಟ್ವಾಮ್ನಾಯ ಪ್ರಸಂಗ.