Index   ವಚನ - 56    Search  
 
ಮರಲ್ದುಮಾಜ್ಞೇಯಿಂ ಮೇಲೆ ಸಹಸ್ರದಳ ಸಮ್ಮಿತಮಾದ ಕಮಲಾಂಕಿತದ ವಿಶುದ್ಧಿಯಿಂ ತೊಡಗಿ, ತನ್ನಂಗುಲಿ ಪರಿಮಿತದಿಂ, ದ್ವಾದಶಾಂತ ಸಂಜ್ಞೆಯನುಳ್ಳ, ಬ್ರಹ್ಮಚಕ್ರ ಸಮುದ್ಧರಣ ಕ್ಷೇತ್ರಮೆಂತೆನಲಾ ಚಕ್ರಕ್ಷೇತ್ರಂ, ಪೂರ್ವಪಶ್ಚಿಮಕ್ಕೆ ರಕ್ತವರ್ಣದ ದ್ವಾದಶಾಂಗುಲ ಪ್ರಣವದಿಂ ದ್ವಿಸೂತ್ರಮಂ ಮಿಡಿಯಲಂತೆಯ ದಕ್ಷಿಣೋತ್ತರಕ್ಕೆಸಗಲಾ ಚಕ್ರಕ್ಷೇತ್ರಂ, ಚೌಮೂಲೆಯಾಗಲೊಡನದರ ದೀರ್ಘಾಯತದ ಗಣನೆ ನೂರನಾಲ್ವತ್ತನಾಲ್ಕಂಗುಲ ಪ್ರಮಾಣಮಾದುದೆಂದು ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ವಿಮರ್ಶನ ವ್ಯೋಮ ಪ್ರಭಾಕರ.