Index   ವಚನ - 58    Search  
 
ಬಳಿಕಲುಂ ದ್ವಂಗುಲದ ಬಟುವೆ ಕರ್ಣಿಕೆಯಾ ಕವಯಾರಮನೂರಿದ ನೆಲೆಯೆ ಬ್ರಹ್ಮರಂಧ್ರವೆನಿಪ ಸೂಕ್ಷ್ಮಕರ್ಣಿಕೆಯಾ ದ್ವ್ಯಂಗುಲ ವೃತ್ತವೆ ಸ ಕೇಸರ ಚತುರ್ದಳಾನ್ವಿತ ಸ್ಥೂಲಕರ್ಣಿಕೆ- ಯದರಾಚೆಯ ಬಟುವೆ ಅಗ್ನಿಮಂಡಲ- ಮದರಾಚೆಯ ಬಟುವೆ ಚಂದ್ರಮಂಡಲ- ಮದರಾಚೆಯ ಬಟುವೆ ಸೂರ್ಯಮಂಡಲಮೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಪಟುತರ ವೃಷತುರಂಗ.