Index   ವಚನ - 87    Search  
 
ಇಂತು ವರ್ಗತ್ರಯ ನಿರೂಪಣಾನಂತರದಲ್ಲಿ, ಚಕ್ರಕಮಲಕರ್ಣಿಕಾದಿ ಮಂಡಲತ್ರಯದೊಳಗೆ ನ್ಯಸ್ತವರ್ಗಂಗಳಲ್ಲಿ, ಮೊದಲ ಸೂಕ್ಷ್ಮಕರ್ಣಿಕಾ ನ್ಯಸ್ತವರ್ಗಮಂ ನಿರೂಪಿಸುವೆನೆಂತೆನೆ- ನಾದವೆಂದು ಗುಹ್ಯವೆಂದು ಪರವೆಂದು ಜೀವವೆಂದು ದೇಹಿಯೆಂದು ಭೂತವೆಂದು ಪಂಚಮವೆಂದು ಸಾಂತವೆಂದು ತತ್ವಾಂತವೆಂದು ಭೂತಾಂತವೆಂದು ಶಿವಾರ್ಣವೆಂದು ಶೂನ್ಯವೆಂದವ್ಯಯವೆಂದೀ ಪದಿಮೂರ್ಪೆಸರ್ಕರ್ಣಿಕಾನ್ಯಸ್ತ ಹಕಾರಕ್ಕೆಂದು ನಿರೂಪಿಸಿಸಿದೆಯಯ್ಯಾ, ಪರಾತ್ಪರ ಪರಮ ಶಿವಲಿಂಗೇಶ್ವರ.