Index   ವಚನ - 96    Search  
 
ಮತ್ತಂ, ನಾಡ ಜನವು ತಮ್ಮತಮ್ಮ ಪೆಸರ ಸ್ತುತಿ ಕ್ಷೇಮಾಭಿಮಾನನಿಗಳಾಗಿರ್ದ ಕಾರಣಂ ನಂಬುಗೆಯಿಂ ಪೆಸರ್ಗೊಂಡವರ್ಗೆ ಸಮಸ್ತಮನಿತ್ತು ಮನ್ನಿಪುದೆಂತಂತೆ ಜೀವಂ ತನ್ನ ದಿವ್ಯನಾಮಮಂ ನೆನೆದವರ್ಗೆ `ಮನನಾ ತ್ರಾಯತ ಇತಿ ಮಂತ್ರ'ಯೆಂಬ ವಿಗ್ರಹೋಕ್ತಿಯಿಂ ವಾಚಕದೊಳ್ವಾಚ್ಯನಾಗಿರ್ದೋಮೆಂದು ದನಿಗೊಟ್ಟು ಸನ್ನಿಧಿಸ್ಥನಾಗಿ ಬೇಡಿದುದನಿತ್ತಪನೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಪರಾಪರರೂಪ.