ಇಂತು, ಪಂಚಭೌತಿಕವಾದೈವತ್ತಕ್ಕರವೆ
ಜೀವಸಂಜ್ಞಿತಮಪ್ಪ ಸಾಂತಕ್ಕೆ ಪುರಾಷ್ಟಕಮೆನಿಸಿತ್ತು.
ಮತ್ತಮೀ ಮೂಲಪ್ರಸಾದವೆ ಜೀವಪ್ರಸಾದವಾದುದು.
ಬಳಿಕಂ, ಬ್ರಹ್ಮಾದಿ ತೃಣಂ ಕಡೆಯಾಗಿ ಚರಾಚರರೂಪವಾದ
ಚಿತ್ಕಾರಣಮೆನಿಸಿ ಭೂತಭವಿಷ್ಯದ್ವರ್ತಮಾ[ನಾ]ತ್ಮಕವೆಲ್ಲವುಂ
ಮೂಲಪ್ರಸಾದದಲ್ಲಿಯೆ ಸಾಗರ ತರಂಗ
ನ್ಯಾಯದಿಂದಂತ-ರ್ಗತವಾದುದೆಂದು ನಿರೂಪಿಸಿದೆಯ್ಯಾ,
ಪರಶಿವಲಿಂಗೇಶ್ವರ ಗಿರಿಜೋತ್ಸವಾಬ್ಧಿನಿಶಾಕರ.
Art
Manuscript
Music
Courtesy:
Transliteration
Intu, pan̄cabhautikavādaivattakkarave
jīvasan̄jñitamappa sāntakke purāṣṭakamenisittu.
Mattamī mūlaprasādave jīvaprasādavādudu.
Baḷikaṁ, brahmādi tr̥ṇaṁ kaḍeyāgi carācararūpavāda
citkāraṇamenisi bhūtabhaviṣyadvartamā[nā]tmakavellavuṁ
mūlaprasādadalliye sāgara taraṅga
n'yāyadindanta-rgatavādudendu nirūpisideyyā,
paraśivaliṅgēśvara girijōtsavābdhiniśākara.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ