•  
  •  
  •  
  •  
Index   ವಚನ - 1484    Search  
 
ಲಿಂಗವಿಡಿದು ಅರಿವ ಅರಿವು ಅರಿವಲ್ಲ, ಗುರುವಿಡಿದು ಅರಿವ ಅರಿವು ಅರಿವಲ್ಲ. ಗುರುವಿಡಿದು ಲಿಂಗವುಂಟೆಂಬುದು ಕಲ್ಪಿತ, ತನ್ನಿಂದ ತಾನಹುದಲ್ಲದೆ. ಗುಹೇಶ್ವರಲಿಂಗದಲ್ಲಿ ಹಂಗು ಹರಿಯದನ್ನಕ್ಕರ ತಾನಾಗಬಾರದು ಕಾಣಾ ಚೆನ್ನಬಸವಣ್ಣಾ.
Transliteration Liṅgaviḍidu ariva arivu arivalla, guruviḍidu ariva arivu arivalla. Guruviḍidu liṅgavuṇṭembudu kalpita, tanninda tānahudallade. Guhēśvaraliṅgadalli haṅgu hariyadannakkara tānāgabāradu kāṇā cennabasavaṇṇā.
Hindi Translation लिंग अपनाकर जानने का ज्ञान के बिना गुरु अपनाकर जानने का ज्ञान ज्ञान नहीं। गुरु अपनाकर लिंग है कहना कल्पित, अपने से आप रहे बिना। गुहेश्वर लिंग में उपकार न टूटने तक मैं खुद न होना देख चेन्नबसवण्ण। Translated by: Eswara Sharma M and Govindarao B N