Index   ವಚನ - 109    Search  
 
ಇಂತೀ ಸ್ಥಿತಮಾರ್ಗದೈದು ಪ್ರಸಾದಮಂತ್ರಂಗಳಿವು ಬೀಜವಾದ ಕಾರಣ ಶಿವಮಂತ್ರಂಗಳನ್ನು ಸೃಷ್ಟಿವರ್ಗದಿಂದುದ್ಧರಿಪ ಸಾದಾಖ್ಯ ಸಂಜ್ಞಿತ ಸದಾಶಿವ ಮಂತ್ರಗಳೆಂತೆನೆ- ಮೋಕ್ಷದವೆಂದಭಿವೃದ್ಧಿಯೆಂದು ಕಾಮ್ಯವೆಂದು ಶಾಂತಿಕವೆಂದು ಪೌಷ್ಠಿಕವೆಂದೈದೆರಂಗಳಾಗಿರ್ಪುವಿವಕ್ಕೆ ವಿವರಂ- ಮೋಕ್ಷದವೆ ಪಂಚಾಕ್ಷರಮಭಿವೃದ್ಧಿಯೆ ಷಡಕ್ಷರಂ. ಕಾಮ್ಯವೆ ಅಷ್ಟಾಕ್ಷರಂ ಶಾಂತಿಕವೆ ನವಾಕ್ಷರಂ. ಪೌಷ್ಠಿಕವೆ ದಶಾಕ್ಷರಮಿವಕ್ಕೆ ವಿವರ-ವಗ್ನಿಮಂಡಲದ ಸೃಷ್ಟಿಮಾರ್ಗದಿ ಶವರ್ಗದ ಶಕಾರದ ನಾಲ್ಕನೆಯಕ್ಕರವನುದ್ಧರಿಸಿಮದಕ್ಕೆ ಚಂದ್ರಮಂಡಲದಿಂದ್ರವರ್ಗದ ತ್ರಯೋದಶಾಂತಮಾದಕ್ಕರಮಂ ಪತ್ತಿಸಿ ಪರಾಪರದೊಡನೊಂದಿಸಲ್ಮೊದಲಂತೆ ಮೂಲಪ್ರಸಾದವಾಯಿತ್ತೀ ಮೂಲಪ್ರಸಾದವೆ ಸದಾಶಿವಮಂತ್ರಗಳೈದಕ್ಕೆಯು-ಮಾಧ್ಯಕ್ಷರಮಾದುದೆಂದು ನಿರವಿಸಿದೆಯಯ್ಯಾ, ಪರಮಶಿವಲಿಂಗೇಶ್ವರ.