Index   ವಚನ - 131    Search  
 
ಬಳಿಕಮೀ ಪಂಚವಿಂಶತಿ ಬ್ರಹ್ಮಂಗಳ ಲಕ್ಷಣಮಂ ಪೇಳ್ವೆನೆಂತೆನೆ- ಈಶಾನಾಮೀಶ್ವರಂ ಬ್ರಹ್ಮಂ ಶಿವಂ ಸದಾಶಿವಗೀ ಪಂಚಮೂರ್ತ್ಯಾಕೃತಿಗಳಾವಾವವುಂಟವೆ ಪಂಚ ಪ್ರಣವಾಕೃತಿಗಳಿವೆ ಸದ್ಯಾದಿ ಪಂಚಬ್ರಹ್ಮಂಗಳವರ ಲಕ್ಷಣಮೆಂತನೆ ಪೇಳ್ವೆಂ- ಕರ್ತೃಸಾದಾಖ್ಯ, ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ, ಅಮೂರ್ತಿಸಾದಾಖ್ಯ, ಶಿವಸಾದಾಖ್ಯಂಗಳವರ ಭಾವಮಂ ತರದಿಂ ಸದ್ಯಾದಿಗಳಲ್ಲಿ ತಿಳಿವುದು. ಇಂತು ತಿಳಿದೊಡೆ ಪರಿವಿಡಿಯಿಂ ಪಂಚಪ್ರಸಾದಂಗಳ ಕುರುಪುಗಳುಂಟಾದಪವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.