Index   ವಚನ - 138    Search  
 
ಮತ್ತಮೀ ಷಡಂಗಮಂತ್ರಗಳೆ ಬೇರೆ ಬೇರೆಯೊಂದೊಂದರೊಳಾರಾರು ತೆರನುಂಟುವಾವಾವವೆನೆ ಪೇಳ್ವೆಂ ಹ್ರಾಂ ಎಂಬುದು ಹೃದಯಮಂತ್ರಂ. ಹ್ರೀಂ ಎಂಬುದು ಶಿರೋಮಂತ್ರಂ. ಹ್ರೂಂ ಎಂಬುದು ಶಿಖಾಮಂತ್ರಂ. ಹ್ರೈಂ ಎಂಬುದು ಕವಚಮಂತ್ರಂ. ಹ್ರೌಂ ಎಂಬುದು ನೇತ್ರಮಂತ್ರಂ. ಹ್ರಃ ಎಂಬುದಸ್ತ್ರಮಂತ್ರಂ. ಇವಾರುಂ ಶಿವಾಂಗ ಮಂತ್ರಂ. ಹೃದಯಾದ್ಯಸ್ತ್ರಾಂತಮಾದ ಷಡಂಗಮಂತ್ರಗಳ ಚತುರ್ಥಾಂತಮಾಗಿಯುಂ ನಮಸ್ಕಾರಾದಿ ಷಟ್ಟಲ್ಲವುಚ್ಚರಿಪಂದವೆಂತೆನೆ ನಮಃ ಸ್ವಾಹಾ ವಷಟ್ ಹುಂ ವೌಷಟ್ ಫಟ್ ಎಂಬಿವು ಷಟ್ಟಲ್ಲವಂಗಳ್. ಇವರುದಾಹರಣಂ ಓಹ ಹ್ರಾಂ ಹೃದಯಾಯ ನಮಃ ಓಂ ಹ್ರೀಂ ಶಿರಸೆ ಸ್ವಾಹಾ, ಓಂ ಹ್ರೂಂ ಶಿಖಾಯೈ ವಷಟ್ ಓಂ ಹ್ರೈಂ ಕವಚಾಯ ಹುಂ, ಓಂ ಹ್ರೌಂ ನೇತ್ರತ್ರಯಾಯ ವೌಷಟ್ ಓಂ ಹ್ರಃ ಅಸ್ತ್ರಾಯ ಫಟ್ ಎಂಬ ಷಟ್ಪಲ್ಲವಂಗೂಡಿದುದೇ ಶಿವಾಂಗಮಂತ್ರವೆಂದು ನಿರವಿಸಿದೆಯಯ್ಯಾ,ಪರಶಿವಲಿಂಗಯ್ಯ.