Index   ವಚನ - 140    Search  
 
ಬಳಿಕ್ಕಂ, ಭೂತಾಂಗ ನಿರೂಪಣಾನಂತರದಲ್ಲಿ ಕೂಟಾಂಗಮಂ ಪೇಳ್ವೆನೆಂತೆನೆ- ಕೂಟಾಕ್ಷರ ಸಂಜ್ಞಿತವಾದ ಕ್ಷ್ ಎಂಬಕ್ಕರಮಂ ಸ್ವರ ದ್ವಿತೀಯಮಂ ಸ್ವರ ಚತುರ್ಥಮಂ ಸ್ವರ ಷಷ್ಠಮಂ ಸ್ವರೈಕಾದಶಾಂತಮಂ ಸ್ವರ ತ್ರಯೋದಶಾಂತಮಂ ಸ್ವರ ಪಂಚದಶಾಂತಮಂ ತರದಿಂ ಕೂಡಿಸಿ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಡನೆ ಬೆರಸೆ, ಕ್ಷಾಂ ಕ್ಷೀಂ ಕ್ಷೂಂ ಕ್ಷೆಂ ಕ್ಷೌಂ ಕ್ಷಃ ಎಂದು ಷಡ್ವರ್ಣಯುಕ್ತವಾದ ಕೂಟಾಂಗವಾಯಿತ್ತೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.